ಗಗನದ ನದಿ ಮತ್ತು ಆಲದ ಮರ (ಭಾಗ 2) | The River in the Sky and the Banyan Tree (Part 2)

[ಕನ್ನಡ ವಿಭಾಗ. For the English Version, please scroll down]

ಬಹಳ ಕಷ್ಟವಾದ ವಾರದ ನಂತರ, ನಾವು ಪುನಹ ಭೆಂಕಿಯ ಸುತ್ತಲೂ ಕುಳಿತು ಕೊಂಡಿದ್ವಿ. ದಿನದ ಕೆಲಸ ಮುಗಿದಿತ್ತು. ನಮ್ಮ ಮುಂದೆ ಶಾಂತವಾದ ಇರುಳು ಹರಿಯುತ್ತಿತ್ತು. ಆಕಾಶದಲ್ಲಿ ನಕ್ಷತ್ರಗಳು ನಿಧಾನವಾಗಿ ಸುತ್ತುತ್ತಿದ್ದವು. ಇವತ್ತು ನಮಗೆ ಚಂದಾಮಾಮನ ಬರೀ ಉಗುರು ಕಾಣುತ್ತಿತ್ತು. ಒಂದು ತಂಪವಾದ ಗಾಳಿಯು ನಮ್ಮ ಬೆನ್ನುಗಳ ಮೇಲೆ ಉರುಳಿತು. ಭೆಂಕಿಯು ಪಟ-ಪಟ ಅಂತಾ ಶಬ್ದ ಮಾಡಿತು. ಕಥೆಗಾರಿಯ ಬಾಯಿಂದ ಯಾವ ಶಬ್ದವು ಬರಲಿಲ್ಲ. ಅವಳು ನಮ್ಮ ಗಮನಕ್ಕೆ ಕಾಯುತ್ತಿದಳು. ನಮ್ಮ ಮಾತುಗಳ ಗಲಾಟೆ ಇಳಿದಾಗ, ನಾವು ಅವಳ ಕಡೆ ನೋಡಿದ್ವಿ. ಅವಳು ನಮ್ಮನ್ನು ನೋಡಿದಳು. ಉಸಿರು ಎಳೆದು, ಅವಳು ದಟ್ಟ್ ಅಂತ ಪ್ರಾರಂಭಿಸಿದಳು:

ಜನರೇ, ನಾನು ನಿಮಗೆ ಗಗನದ ನದಿಯ ಬಗ್ಗೆ ಆಗಲೇ ಕಥೆ ಹೇಳಿದಾಯಿತು. ನಿಮ್ಮ ತಲೆ ಎತ್ತಿದರೆ, ಆ ನದಿಯನ್ನು ನೀವು ನೋಡಬಹುದು. ನಾನು ನಿಮಗೆ ಸೂರ್ಯ, ಚಂದ್ರಮಾಮ, ಗಾಳಿಗಳ ಬಗ್ಗೆ ಆಗಲೇ ತಿಳಿಸಿದ್ದೇನೆ. ಆದರೆ ಒಬ್ಬರ ವಿಚಾರ ನಾನು ನಿಮಗೆ ಇನ್ನೂ ಯೇನು ಹೇಳಿಲ್ಲಾ. ಅವರು ನಮ್ಮ ಭೂಮಿತಾಯಿ.

ಭೂಮಿಯು ಯೆಲ್ಲಿಂದ ಬಂದಳು ಅಂತ ನಮಗೆ ಗೊತ್ತಿಲ್ಲಾ. ಕೆಲವರನ್ನು ನಂಬಿದರೆ, ನಮ್ಮ ಭೂಮಿತಾಯಿಯೂ ಆಳ-ಜ್ವಾಲ ಮತ್ತೆ ಲವಣಜಲಗಳಿಂದ ಹುಟ್ಟಿದಳು. ಅವಳ ಹುಟ್ಟಿನ ನಂತರ ಈ ಜ್ವಾಲಾ-ಜಲಗಳು ಮೇಲೆ ಏರಿ, ಸೂರ್ಯ-ಚಂದಾಮಾಮನನ್ನು ರಚಿಸಿದವು. ಬೇರೆಯವರನ್ನು ನಂಬ ಬೇಕಾದರೆ, ಈ ಆಳ-ಜ್ವಾಲಗಳು ಮತ್ತೆ ಲವಣಜಲಗಳು ಆಕಾಶಗಳಲ್ಲಿ ಸೂರ್ಯ-ಚಂದ್ರ ಗಲ್ಲನು ರಚಿಸಿದ ನಂತರ, ಇನ್ನೂ ದೊಡ್ಡ ಮನೆಯನ್ನು ಹುಡುಕುತ್ತಿರುವಾಗ ಭೂಮಿಗೆ ಜನ್ಮ ನೀಡಿದರು.

ಯೆನಾದರೂ ಇರಲಿ, ನಮಗೆ ಇದಂತು ಗೊತ್ತಿದೆ - ಭೂಮಿತಾಯಿಯನ್ನು ಎಲ್ಲರೂ ಗೌರವಿಸುತ್ತಾರೆ. ಇದರಿಂದಲೇ, ಎಲ್ಲಾ ಜೀವಿಗಳು ಮೊದಲು ಭೂಮಿತಾಯಿಯ ಮನೆಯಲ್ಲಿ ಹುಟ್ಟಿ, ಉಸಿರು ಬಿಟ್ಟಾದ ನಂತರ ಮಾತ್ರ, ನಮ್ಮ ಚಂದ್ರಮಾಮನ ಮನೆಗೆ ಹೋಗುತ್ತೇವೆ. ನಾವು ಚಂದ್ರಮಾಮಾನ ಜನರು ಆಗಿರಬಹುದು, ಆದರೆ ನಾವು ಮೊದಲು ಭೂಮಿತಾಯಿಯ ಮಕ್ಕಳು.

ಲವಣಜಲಗಳಿಂದ ಸಿಹಿನೀರನ್ನು ಹೊರತಗೆದಿದ್ದು ಈ ಭೂಮಿತಾಯಿಯೇ. ಆ ಉಪ್ಪಿನ ರಸವನ್ನು ತನ್ನ ನೆಲದೊಳಗೆ ಹೀರಿಕೊಂಡು, ಮಿಕ್ಕಿದ ಸಿಹಿನೀರನ್ನು ಮೇಲೆ ತಳ್ಳಿ, ಈ ಪ್ರಪಂಚದ ಮೊದಲನೆಯ ಬುಗ್ಗೆಗಳನ್ನು ಮಾಡಿದಳು. ಇದು ಜೀವಕ್ಕೆ ಅಗತ್ಯವಾಗಿತ್ತು. ಈ ಬುಗ್ಗೆಗಳು ಹುಟ್ಟಿಲ್ಲದಿದ್ದರೆ, ಯಾವೂ ಪ್ರಾಣಿ-ಪಕ್ಷಿಗಳು, ಯಾವೂ ಮನುಶಯರು ಜೀವಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಸಿಹಿನೀರನ್ನು ರಚಿಸಲಾದ ನಂತರ, ಭೂಮಿತಾಯಿಯೂ ಗಾಳಿಗಳಿಗೆ ಮಾತು ಕೊಟ್ಟಳು.
"ತಂಗಿಗಳೆ" ಅಂತ ಮಾತು ಶುರು ಮಾಡಿದಳು. "ನಿಮಗೆ ಈ ಪ್ರಪಂಚದಲ್ಲಿ ಜೀವನ ನೋಡಬೇಕೆಂದರೆ, ನಾನು ಹೇಳಿದಹಾಗೆ ಮಾಡಬೇಕು."

ಅವಳು ಬುಗ್ಗೆಗಳನ್ನು ಗಾಳಿಗಳಿಗೆ ದಾನ ಮಾಡಿದಳು. ಬುಗ್ಗೆಗಳ ಸಿಹಿನೀರನ್ನು ಪ್ರಪಂಚದ ಎಲ್ಲಾ ಕಡೆ ಹರಡು ಬನ್ನಿ ಎಂದಳು. ಎಂಥ ಅದ್ಭುತವಾದ ದೃಶ್ಯ! ನ್ಯಾಪಿಸಿ ಕೊಳ್ಳಿ, ಇದು ನಮ್ಮ ಪ್ರಪಂಚದಲ್ಲಿ ಮಳೆ ಬರುವ ಮುಂಚೆಯ ಸಮೆಯ. ಗಾಳಿಗಳು ಸಿಹಿನೀರಿನಿಂದ ಉದ್ದವಾದ, ಅಗಲವಾದ ಕಂಬಳಿಗಳನ್ನು ನೇಯ್ದರು. ಎಂಥಾ ಕಂಬಳಿಗಳು! ಚಿಣಮಿಣ ಅಂತ ಮಿಣುಗುತ್ತಾ, ಪ್ರಪಂಚದ ಪ್ರಕಾಶದಿಂದ ಹೊಳೆಯುತ್ತಾ, ಈ ಕಂಬಳಿಗಳು ಬರ-ಸೋಂಕಿತವಾದ ನೆಲವನ್ನು ನೆನಿಸಿ, ಮೊದಲಾದ ಬೀಜಗಳಿಗೆ ಮಣ್ಣು ಮಾಡಿದವು. ನಮ್ಮ ಭೂಲೋಕದಲ್ಲಿ ಮೊದಲ ಬಾರಿಗೆ ಸುಹಾಸನೆ ಬಂದಿತು -- ಒಣಭೂಮಿಯ ನೆಲದ ಮೇಲೆ ನೀರು ಸುರಿದಾಗ ಬರುವ ಸುಹಾಸನೆ.

ಸೂರ್ಯನು ಅಸೂಯೆ ಇಂದ ಇದನ್ನೆಲಾ ನೋಡುತ್ತಿದ್ದಾ. ಭೂಮಿತಾಯಿಯೂ ಜೀವನಕ್ಕೆ ಮನೆ ಮಾಡುತ್ತಿದ್ದಳು ಮತ್ತೆ ಗಾಳಿಗಳು ಆ ಮನೆಯನ್ನು ನಿರ್ಮಲಪಡಿಸುತ್ತಿದ್ದರು. ಚಂದ್ರನು ಜೀವನದ ಮೊದಲನೆಯ ಬೀಜಗಳ್ಳನೂ ರಚಿಸುತ್ತಿದ್ದಾ. ಈ ಪ್ರಪಂಚದ ರಂಗಸ್ಥಳದಲ್ಲಿ ಸೂರ್ಯನಿಗೆ ಯಾವ ಪಾತ್ರವವೂ ಇರಲಿಲ್ಲಾ. ಬೇಸಗೆಯಿಂದ ಅವನು ಬರೀ ಝುಲಪಿಸಬಹುದಾಗಿತ್ತು. ಈ ಸ್ಥಿತಿಯನ್ನು ಕಂಡು, ಅವನು ಕಪಟಕೆಲಸದಿಂದ ಭೂಮಿಯ ಸಿಹಿನೀರನ್ನು ಕದ್ದು, ಅವನದೇ ಅನನ್ಯವಾದ ಜೀವನವನ್ನು ರಚಿಸುವುದಕ್ಕೆ ನಿರ್ಧರಿಸಿದ.

ಕೋಪದಿಂದ ಸುಡಿಯುತ್ತಾ, ಅವನು ಗಗನದಿಂದ ಕೆಳಗೆ ಹಾರಿ, ಸಿಹಿನೀರಿನ ಕಂಬಳಿಗಳನ್ನು ಗಾಳಿಗಳಿಂದ ಕಿತ್ತುಕೊಂಡು, ಮತ್ತೆ ಮೇಲೆ ಹಾರಿದ. ಗಾಳಿಗಳು ಬೇಸಿಗೆ ಇಂದ ಒಣಗಿ, ನೆಲಕ್ಕೆ ಬಿದ್ದವು. ಬಿದ್ದುತ್ತಿರುವಾಗಲು, ಸೂರ್ಯನು ಪುನಹ ಕೆಳಗೆ ಬಂದು, ಭೂಮಿತಾಯಿಯ ಮೊದಲನೆಯ ಬುಗ್ಗೆಗಳನ್ನೇ ಕುದಿಸಿ-ಕದ್ದಿದನು. ಇವೆಲ್ಲಾ ಎಷ್ಟು ಛಕ್ ಅಂತಾ ಆಯಿತು ಅಂದರೆ, ಭೂಮಿ-ಗಾಳಿಗಳಿಗೆ ಸಿಹಿನೀರಿನ ಖಳ್ಳಣ ಮುಖ ಕಾಣಲಿಲ್ಲಾ.

ಭೂಮಿಗಾಳಿಗಳು ಕಳೆದ ಹೋದ ಸಿಹಿನೀರಿನನ್ನು ಗೊಂದಲಮಯದಿಂದ ಹುಡುಕುತ್ತಿದರು. ಭೂಮಿತಾಯಿಯೂ ಲವಣಜಲಗಳಿಂದ ಇನ್ನೂ ಸಿಹಿನೀರನ್ನು ತಗೆಯುವುದಕ್ಕೆ ಪ್ರಯತ್ನಿಸಿದಳು, ಆದರೆ ಅವಳಿಗೆ ಶಕ್ತಿ ಇರಲಿಲ್ಲಾ. ಸೂರ್ಯನು ತನ್ನ ಪಶ್ಚಿಮದ ಮನೆಗೆ ಹೊರಡುತ್ತಿರುವಾಗ, ಭೂಮಿಗಾಳಿಗಳ ನಿರಾಶೆಗೊಂಡ ಕೂಗುಗಳು ಪ್ರಪಂಚವನ್ನು ತುಂಬಿತು. ಆಗ ಚಂದ್ರನು ಪೂರ್ವದಲ್ಲಿ ಏರಿದನು. ತನ್ನ ಅಕ್ಕಾ-ತಂಗಿಯರ ಕೂಗುಗಳನ್ನು ಕೇಳಿ, ವಿಶ್ವಸುತ್ತಾ ನೋಡಿದನು. ಸೂರ್ಯನ ಹಣೆಯ ಮೇಲೆ ಒಂದು ಕಪ್ಪವಾದ ಸಿಹಿನೀರಿನ ಮೋಡಾ ಕಂಡನು. ಆಗಲೇ ಅವನಿಗೆ ಗೊತ್ತಾಯಿತು -- ಸೂರ್ಯನೇ ಸಿಹಿನೀರಿನ ಖಳ್ಳ.

ಚಂದ್ರಮಾಮನು ನೆಲಕ್ಕೆ ಇಳಿದು, ತನ್ನ ಅಕ್ಕಾ-ತಂಗಿಯರ ಜೊತೆಗೆ ಮಾತನಾಡಿದನು. ಖಳ್ಳನ ಬಗ್ಗೆ ಕೇಳಿ, ಭೂಮಿಯ ಕ್ರೋಧ ಸಿಡಿಯಿತು. ಅವಳ ಒಳಗಿದ್ದ ಆಳ-ಜ್ವಾಲಗಳು ನೆಲದ ಮೈಯನ್ನು ಮುರಿದು, ಆಕಾಶಕ್ಕೆ ಹಾರಿದವು. ಕೆಲವರನ್ನು ನಂಬಿದರೆ, ಆ ಸಿಡಿದ ಜ್ವಾಲಾಗಳು ಈಗಲೂ ಭೂಲೋಕದ ಕೆಲವು ಜಾಗ ಗಳಲ್ಲಿ ನಮಗೆ ಕಾಣ ಬಹುದು. ಪೂರ್ವಧಿಕ್ಕಿನಲ್ಲಿ, ಬಹಳ ದೂರದಲ್ಲಿ ಈ ಜ್ವಾಲಾಮುಖಿಗಳನ್ನು ಇನ್ನೂ ಕಾಣತ್ತದೆ.

ಭೂಮಿತಾಯಿಯ ಕೋಪ ಎಷ್ಟು ಹೆಚ್ಚಾದರು ಅವಳ ತಾಳ್ಮೆಯು ಇನ್ನೂ ಜಾಸ್ತಿ. ಕ್ರೋಧವನ್ನು ತಂಪಿಸಿ, ಮತ್ತೊಮೆ ಗಾಳಿಗಳು ಮತ್ತೆ ಚಂದ್ರನ ಜೊತೆಗೆ ಮಾತಿನ ವಿನಿಮಯ ನಡೆಸಿದಳು. ಅವರೆಲ್ಲರಿಗೂ ಗೊತ್ತಿತ್ತು -- ಸೂರ್ಯನು ಸಿಹಿನೀರನ್ನು ವಾಪಸ್ ಕೊಡುವುದಕ್ಕೆ ಒಪ್ಪುವುದಿಲ್ಲಾ. ಅವನಿಂದ ಸಿಹಿನೀರು ಸಿಗಬೇಕೆಂದರೆ, ಬಲವಂತ ಮಾಡಿ, ಕಿತ್ತುಕೊಳ್ಳ ಬೇಕಾಗುತ್ತದೆ. ಜೀವನವನ್ನು ಭೂಲೋಕದಲ್ಲಿ ರಚಿಸಬೇಕೆಂದರೆ, ಇರುವ ದಾರಿ ಇದೇ. ಭೂಮಿತಾಯಿಯೂ ಚಂದ್ರನಿಗೆ ಸೂರ್ಯನ ಜೊತೆ ಯುದ್ಧ ಮಾಡುವುದಕ್ಕೆ ಆಜ್ಞೆ ಕೊಟ್ಟಳು.

ಆದರೆ ನಮ್ಮ ಚಂದ್ರಮಾಮನಿಗೆ ಯುದ್ಧ ಕಲೆಯನ್ನು ಯೆಲ್ಲಿಂದ ಕಲಿಯುವುದು? ಅವನು ಸೂರ್ಯನ ತಮ್ಮನಾದರೂ ಸೂರ್ಯನ ಶಕ್ತಿ ಅಥವಾ ಸೂರ್ಯನ ಕೌಶಲ್ಯವಿರಲ್ಲಿಲ್ಲಾ. ಸ್ಥಿತಿ ಹೀಗಿದ್ದಾಗ, ಸಿಹಿನೀರನ್ನು ಚಂದ್ರನು ಸೂರ್ಯನಿಂದ ಹೇಗೆ ಪಡೆಯ ಬಹುದು?

ಜನರೇ, ನಿಮಗೆ ಗೊತ್ತಿದೆ: ದುಃಖ-ಕೋಪ ಕಾಲಗಳಲ್ಲಿ ನಮಗೆ ಕಷ್ಟದ ಪ್ರಶ್ನೆಗಳ ಉತ್ತರಗಳು ಯಾವ-ಯಾವ ಜಾಗಗಳಿಂದಲೋ ಬರುತ್ತವೆ. ಆ ಕಾಲದಲ್ಲೂ ಅದೇ ಆಯಿತು. ಚಂದ್ರನಿಗೆ ಉತ್ತರ ಸಿಕ್ಕಿದ್ದು ತನ್ನ ಪ್ರಥಮೋತ್ತಮ ಮಗುವಿಂದ -- ಆಲದ ಮರದಿಂದ.

ಹೀಗೆ ಹೇಳಿ, ಕಥೆಗಾರಿಯೂ ತನ್ನ ಕಥೆಯನ್ನು ಇವತ್ತಿಗೆ ನಿಲ್ಲಿಸದಳು. ನಮಗೆ ಬೇಜಾರಾಯಿತು. ಅವಳು ಇನ್ನೂ ಆಲದ ಮರದ ಬಗ್ಗೆ ಯೇನು ಹೇಳೇ ಇಲ್ಲಾ! ಯಾವಾಗ ಕಥೆಯನ್ನು ಪೂರೈಸುತ್ತಾಳೆ? "ತಾಳ್ಮೆ ಇಟ್ಟು ಕೊಂಡಿರಿ!" ಅಂತ ಹೇಳಿದಳು. "ಭೂಮಿಯ ಪಾತ್ರದ ಬಗ್ಗೆ ಹೇಳದೇ, ನಿಮಗೆ ಆಲದ ಮರದ ಕಥೆ ಹೇಗೆ ಹೇಳಲಿ? ಹೇಳಿ? ತಾಳ್ಮೆ ಇಟ್ಟು ಕೊಂಡಿರಿ. ಮುಂದಿನ ವಾರ ಈ ಕಥೆಯನ್ನು ಮುಗಿಸುತ್ತೇನೆ." ನಾವು ಗೊಣಗಾಟ ಮಾಡುತ್ತಾ, ನಮ್ಮ ಮನೆಗಳಿಗೆ ಹೊದ್ವಿ.


[English Version]

After a long week, we gathered around the fire again. The day's work was done. A quiet night lay ahead. The stars wheeled over us. The moon was a thin crescent, floating in the east. A cold wind washed over our backs, crackling the flames in front of our eyes. The storyteller said nothing, waiting for us for settle. As our voices faded to match the evening quiet, our gazes aligned in her direction. She noticed. Drawing breath, she resumed her story without ceremony:

My dear people, I've already told you about the River in the Sky. Look up, and you can see it floating up there, its many currents made from the steams of our ancestors' fires.

I told you about the Sun, the Moon, and the Winds, about how they fought with each other for precious water. I told you how the Sun stole water from his sisters, for himself. I also told you about the Moon, and how he saved our people from the Sun's greed. I told you about how our people received the Moon's gift with gratitude, and in turn, boiled the stolen water to gift to us.

There is someone I haven't spoken about, and that is the Earth. We do not know where the Earth came from. Some say the Earth was born of the Deep Fires and the Salt Waters, long before they rose to the heavens to create the Sun and the Moon. Others say the Sun and Moon came first and that the Earth was made when the Fires and Waters sought a greater home.

Whatever the truth, we know that the Earth is respected. This is why all life is first born in her realm, before travelling to reside with the Moon. We are the Moon's people, but the Earth's children.

It was the Earth which first sweetened the Salt Waters. You and I have never seen them, but we have tasted salt and know what it does to water. The Earth drew the Salt Waters into her own realm, pulled the salt out, and pushed the sweetened waters up to make the first springs. She did this to create life. The first birds, the first animals, the first humans -- if not for the springs, they wouldn't have walked.

The Earth then spoke to the Winds.
"Sisters" she said. "If you wish to see life walk, you will do what I say."

She gifted the sweet springs to the Winds, and asked them to spread the waters far and wide across her realm. What a sight it must have been! Remember, these were the days before rain. The Winds wove water into wide sheets, shimmering and transparent, which they cast like blankets over the barren ground. Every blanket soaked the dust, churning it to mud for the first seeds. Blanket after blanket was woven from the springs, each a hundred fathoms long, a hundred wide. Day after day, the woven blankets would be flung by the Winds to moisten the earth. Petrichor filled the world, the first scent to perfume this realm.

The Sun watched with envy. The Earth had built a home and the Winds were freshening it. The Moon was making the first seeds of life, to be planted in the new soil. What could the Sun do? Bright and shiny, he could only glower. With no role to play in the creation of life, he sought to make trouble. It was then that he decided that he would create his own life, and he would do so with the very waters sweetened by the Earth.

Burning with rage, he swooped down from the heavens, snatching the blankets of water carried by the Winds. The Winds became hot and dry. The water sizzled and steamed, to be snatched up by the greedy Sun. Even as the stunned Winds fell back to the Earth, the Sun went a step further. With another blaze of fire, he boiled the first springs themselves, and carried them to the skies.

All of this had been so swift that the Earth and the Winds did not recognise their thief. Stumbling from the immense heat, the Winds carried a broken search for their lost waters. The Earth tried to sweeten more of the Salt Waters, but her strength was spent. As the Sun wheeled towards his house in the west, and the skies darkened, the frustrated cries of the Earth and the Winds filled the sky.
It was the Moon who realised what was going on. As he rose in the east, listening to the fury of his sisters, he saw a haze surrounding the setting Sun, darkening his brow. He knew it to be water. Climbing down, he conferred with his sisters. Learning about the thief, the Earth raged. Her ancient fires burst out of the ground and pillars of flame were flung into the firmaments of heaven. It is said that some of these fires still burn, far out, in the East.

However, her calm was as swift as her anger. Gathering herself, she conferred once again with the Moon and the Winds. They knew the Sun would refuse to return what he stole. The only path to creating life was to fight him. The Earth commanded the Moon to carry out this task.

But the Moon, parent of our people, was not strong enough to challenge the Sun. The Sun was his elder and far more powerful. How then, could the Moon reclaim the waters back from him?

My dear people, you will see that in times of great sorrow and anger, answers emerge from unusual places. For the Moon, the answer came from the very first of his children, the Banyan Tree.

The storyteller stopped here. We protested. Hadn't she promised to tell us about Banyan Tree? She hadn't even begun! "Keep calm!" said the storyteller. "Without telling you about the Earth and her role, how can I begin to tell you about the Banyan Tree?". She promised the story would be told in full next week. Grumbling, we turned towards our homes.

Author's Note: The above tale is part of the Dodda Nadu Universe, a fictional world where my first novel (which I'm currently writing) is set. The River in the Sky and the Banyan Tree is a legend that's popular among a particular community of people in that Universe.


ಗಗನದ ನದಿ ಮತ್ತು ಆಲದ ಮರ (ಭಾಗ 2) | THE RIVER IN THE SKY AND THE BANYAN TREE (PART 2) BY AMOGH ARAKALI IS LICENSED UNDER A CREATIVE COMMONS ATTRIBUTION-NONCOMMERCIAL-NODERIVATIVES 4.0 INTERNATIONAL LICENSE.

Write a comment ...

Write a comment ...

Amogh Arakali

Fiction, Poetry, Art and Audio from Amogh Arakali