
[ಕನ್ನಡ ವಿಭಾಗ]
ವಾರವು ಯಾಕೋ ಬಹಳ ಉದ್ದವಾಗಿದೆ ಅನ್ನಿಸಿತು. ಮೊದಲು ಶುರು ಮಾಡಿದಾಗ, ಬಹಳ ಜನರಿಗೆ ಕಥೆಗಾರಿಯ ಪುರಾಣದಲ್ಲಿ ಆಸಕ್ತಿ ಇರಲಿಲ್ಲಾ. ಆದರೆ ಸಮಯದ ನಂತರ ಈ ಆಸಕ್ತಿಯು ಜಾಸ್ತಿ ಆಯಿತು. ಚಂದ್ರನು ಹೇಗೆ ನೀರನ್ನು ಪುನಹ ಭೂಮಿತಾಯಿಗೆ ವಾಪಸ್ ತಾಂದಾ? ಇವಾಗೆಲ್ಲಾ ಸೂರ್ಯ-ಚಂದ್ರರು ಜಗಳ ಮಾಡುವುದ್ದಿಲ್ಲವೇ? ನಮ್ಮ ಪೂರ್ವಜರು ಈ ಕಥೆಯಲ್ಲಿ ಯಾವಾಗ ಪ್ರವೇಶಿಸಿದರು? ವಾರ ಸಮಾಪ್ತ ವಾಗುತ್ತಿರುವಾಗ, ನಾವು ಮತ್ತೊಮೆ ಭೆಂಕಿಯ ಸುತ್ತಲೂ ಕೂತ್ವಿ. ಕತೆಗಾರಿಯೂ ನಕ್ಕಿ, ಕಥೆಯನ್ನು ಪ್ರಾರಂಭಿಸಿದಳು:
ಜನರೇ, ನಾನು ನಿಮಗೆ ಆಗಲೇ ಭೂಮಿತಾಯಿಯ ಜೀವನ ಚಿಗುರಿಸುವ ಕೆಲಸದ ಬಗ್ಗೆ ಹೇಳಿದ್ದೇನೆ. ಈ ಕೆಲಸದಲ್ಲಿ ಗಾಳಿ ಮತ್ತೆ ಚಂದ್ರನ ಪಾತ್ರಗಳ ವಿಚಾರ ಆಗಲೇ ತಿಳಿಸಿದ್ದೇನೆ. ಸೂರ್ಯನ ಸಿಹಿನೀರಿನ ಕದಿಯುವ ಅಪರಾಧದ ಬಗ್ಗೆ ಮಾತು ಕೊಟ್ಟಿದೇನೆ. ಭೂಮಿತಾಯಿಯ ಚಂದ್ರನಿಗೆ ಸಿಹಿನೀರು ಪುನಹ ವಾಪಸ್ ತರಿಸುವ ಕೆಲಸದ ಬಗ್ಗೆ ತಿಳಿಸಿದ್ದೇನೆ.
ಆದರೆ, ನಮ್ಮ ಚಂದಾಮಮನು ಯೋದ್ಧವಲ್ಲಾ. ಅವನಿಗೆ ಯುದ್ಧ ಮಾಡುವ ಕಲಾ ಗೊತ್ತಿಲ್ಲಾ. ಗೊತ್ತಿದ್ದರೂ, ಅವನ ಅಣ್ಣ ಸೂರ್ಯನನ್ನು ಸೋಲಿಸುವುದಕ್ಕೆ ಸಾಧ್ಯವಿಲ್ಲ. ಸೂರ್ಯನು ಬಹಳ ಶಕ್ತಿಶಾಲಿಯವನು. ಆ ಮಾತು ಬೇರೆ ಹೇಳುತ್ತಾರೆ -- ನಿಮಗೆ ಗೊತ್ತಿದೆಯಾ? -- ಯಾರು ಅಪರಾಧವನ್ನು ಮಾಡುತ್ತಾರೋ, ಅವರಿಗೆ ಅಪರಾಧಗಳ ಪರಿಣಾಮ ಗಳ ಬಗ್ಗೆ ಭಯವಿಲ್ಲಾ. ಆ ಅಭಯಕ್ಕೆ ಸಾಮಾನ್ಯವಾಗಿ ಒಳ್ಳೆ ಕಾರಣ ಇರುತ್ತವೆ.
ಮತ್ತೆ? ಚಂದ್ರನು ಅವನಿಗೆ ಕೊಟ್ಟಿದ ಕೆಲಸವನ್ನು ಹೇಗೆ ಮುಗಿಸುವುದು? ಈ ವಿಚಾರದ ಬಗ್ಗೆ ಯೋಚಿಸುತ್ತಾ, ಚಂದ್ರನು ಗಗನದನ್ನು ಸುತ್ತಿದ್ದನು. ರಾತ್ರಿ ಆದರು, ಸುಟ್ಟಿದ ನೆಲದ ಬಿಸಿಲು ಅವನನ್ನು ಸುಡಿಯಿತು. ಅವನಿಗೆ ನೇರವಾದ ಯೋಚನೆಗಳು ಬರಲಿಲ್ಲಾ. ಅವನಿಗೆ ವಿಶ್ರಾಂತಿ ಪಡೆಯುವ ಬೇಕಿತ್ತು.
ಆ ಸಮಯದಲ್ಲಿ ಅವನು ನಮ್ಮ ಒಂಟಿಬೆಟ್ಟಕ್ಕೆ ಬಂದನು. ಆಕಡೆ ನೋಡಿ, ನಮ್ಮ ಒಂಟಿಬೆಟ್ಟ! ನಮ್ಮ ನಾಡಿನಲ್ಲಿ ಇರುವ ಯೆಲ್ಲಾ ಬೆಟ್ಟ-ಪರ್ವತಗಳಲ್ಲಿ ಹೆಚ್ಚು ಎತ್ತರವಾದ, ದೊಡ್ಡವಾದ ಪರ್ವತಾ! ಅಲ್ಲಿ ಯೇನು ಆಗಿತ್ತು ಗೊತ್ತಾ? ನಿಮಗೆ ಗಾಳಿಗಳ ಸಿಹಿನೀರಿನ ಕಂಬಳಿಯ ಬಗ್ಗೆ ನೆನೆಪಿದೆಯಾ? ಆ ಜಲ-ಕಂಬಳಿಗಳನ್ನು ಗಾಳಿಗಳು ಪೂರ-ಪ್ರಪಂಚದಲ್ಲಿ ಹರಡಿದ್ದವು. ಒಂಟಿಬೆಟ್ಟದ ಶೃಂಗವೂ ನೆನಧೋಗಿತ್ತು.
ಆದರೆ ಮಾತು ಕೇಳಿ! ನಮ್ಮ ಒಂಟಿಬೆಟ್ಟ ಬಹಳ ಎತ್ತರವಾದ ಪರ್ವತ. ಅದು ಎಷ್ಟು ಎತ್ತರವಾಗಿದೆ ಅಂದರೆ, ಸೂರ್ಯನು ನೆಲವನ್ನು ಸುಟ್ಟಿದಾಗ, ಒಂಟಿಬೆಟ್ಟದ ಶೃಂಗದ ಮೇಲೆ ಬಿದ್ದಿದ್ದ ಸಿಹಿನೀರು ಆವಿ ಆಗಲಿಲ್ಲಾ. ಆದರೂ ಒಂಟಿಬೆಟ್ಟಕ್ಕೆ ಸೂರ್ಯದ ಭಯವಿತ್ತು. ಇದರಿಂದ ಬೆಟ್ಟ ಭಯದಿಂದ ನಡುಗುತ್ತಿರುವಾಗ, ಶೃಂಗದ ಸಿಹಿನೀರು ಘಟ್ಟಿ ಆಗಿ ಹಿಮದ ರೂಪದಲ್ಲಿ ಪರ್ವತವನ್ನು ಅಲಂಕಾರಿಸಿತು. ಈ ಹೊಳೆಯುತ್ತಿರುವ ಹಿಮವನ್ನು ಚಂದ್ರನು ಕಂಡನು.
ನಿರೀಕ್ಷೆ ಇಂದ ನಡುಗುತ್ತಾ, ಚಂದ್ರನು ಪರ್ವತದ ಮೇಲೆ ಇಳಿದನು. ಹಿಮದ ಕೆಳಗೆ ಹೋಗಿ, ಒಂಟಿಬೆಟ್ಟದ ಒಂದು ಹೆಗಲ ಮೇಲೆ ನಿಂತಿದಾ. ಇಲ್ಲಿ ಸ್ವಲ್ಪ ಹಿಮವು ಕರಗಿ, ಸಿಹಿನೀರಿನ ಕೊಚ್ಚೆ ಮಾಡಿತ್ತು. ಈ ಸಿಹಿನೀರನ್ನು ಕೊಚ್ಚೆ ಇಂದ ಎತ್ತಿ, ಚಂದ್ರನು ಒಣಗಿದ ನೆಲವನ್ನು ಒದ್ದೆ ಮಾಡಿದನು. ಒದ್ದೆ ಆದ ನಂತರ, ಅವನು ನೆಲದೊಳಗೆ ಅವನ ಮೊದಲ ಬೀಜವನ್ನು ಇಟ್ಟನು. ಆಲದ ಮರದ ಬೀಜ.
ಜನರೇ, ನಿಮಗೆ ನೆನಪಿರಲಿ -- ಇದು ಎಲ್ಲಾ ಜೀವನದ ಮೊದಲನೆಯ ಬೀಜ. ಅದರಪಾಡಿಗೆ ಅದು ಬೆಳೆಯುವುದಕ್ಕೆ ಸಾಧ್ಯವಿಲ್ಲ. ಇದನ್ನು ನೋಡಿ, ಚಂದ್ರನು ಅವನ ಬೆಳಕಿನ ಒಂದು ಕಿರಣವನ್ನು ಕತ್ತರಿಸಿ, ಅದನ್ನು ಭೂಮಿತಾಯಿಯ ಸಿಹಿನೀರಿನಿಂದ ಒದ್ದೆ ಮಾಡಿ, ನೆಲದೊಳಗೆ ನೂಕಿದ. ಈ ಕಿರಣದೊಳಗೆ ಮನೆ ಮಾಡಿಕೊಂಡಾಗ, ಬೀಜ ಜೀವನಕ್ಕೆ ಎಗುರಿತು.
ಅರ್ಧ ಇರುಳು ಮುಗಿಯುವ ಮುಂಚೆ, ಆಲದ ಮರದ ಮೊದಲನೆಯ ಬೇರುಗಳು ನೆಲದೊಳಗೆ ಬೆಳೆದವು. ಮೊದಲನೆಯ ರೊಂಭೆಗಳು ಆಕಾಶಕ್ಕೆ ಏರಿದವು. ಈ ಮೊದಲಜೀವಿಯು ನಮ್ಮ ಪ್ರಪಂಚದಲ್ಲಿ ಇರುವ ಎಲ್ಲಾ ಮರದ ರಾಣಿ ಆಗುತ್ತಾಳೆ, ಆದರೆ, ಅವಳ ಮಕ್ಕಳು ಅವಳ ಮೊದಲನೆಯ ದುರ್ಬಲತೆಯನ್ನು ಇನ್ನೂ ಸಾಗಿಸುತ್ತಾರೆ. ಇದರಿಂದಲೇ ಆಲದ ಬೀಜಗಳು ಯಾವತ್ತೂ ನೆಲದಿಂದ ನೇರವಾಗಿ ಬೆಳೆಯುವುದ್ದಕ್ಕೆ ಕಠಿಣ. ಯಾವಾಗಲೂ ಬೇರೆ ಗಿಡಗಳ ಸಹಾಯ ಬೇಕಾಗುತ್ತದೆ.
ಹೀಗೆ, ಮೊದಲಜೀವಿಯು ಆ ಒಂಟಿಬೆಟ್ಟದ ಮೇಲೆ, ಆ ಸುಟ್ಟಿದ ಪ್ರಪಂಚದ ಒಳಗೆ ಬಂದಳು. ಚಂದ್ರನಿಗೆ ಭಯ ಬಂತು. ಅವನ ಮಗು ಈ ದುರಸ್ತಿಥಿಯ ಕಾಲದಲ್ಲಿ ಹೇಗೆ ಬೆಳೆಯುತ್ತಾಳೆ? ಈ ಯೋಚನೆ ಮನಸ್ಸಿಗೆ ಬಂದಾಗ, ಅವನಿಗೆ ಧೈರ್ಯ ಬಂತು. ನಮಗೆ ಆ ಹಳೆ ಗಾದೆ ಇಲ್ಲವೇ? "ಪೋಷಕವಾದಗ ಎಲ್ಲಾ ಸ್ಟಿತಿಯಲ್ಲು ಧೈರ್ಯ ಉಂಟು." ಚಂದ್ರನು ನಮ್ಮ ಜನರ ಮೊದಲನೆಯ ಪೋಷಕ. ಅವನಿಗೆ ಯುದ್ಧ ಬಾರದಿಲ್ಲ ಬಹುದು. ಆದರೆ ಅವನು ಸೂರ್ಯನನ್ನು ಯುದ್ಧ ಮಾಡದೆ, ಸೂರ್ಯನ ಉದಾಹರಣವೇ ಅನುಸರಿಸಿ, ಸಿಹಿನೀರನ್ನು ಸೂರ್ಯದಿಂದ ಮತ್ತೆ ಕದೆಯುವುದಕ್ಕೆ ನಿರ್ಧಾರಿಸಿದ.
ಸೂರ್ಯನು ಆ ಕತ್ತಲೆಯಾದ, ತಾರೆ ಇಲ್ಲದ ಇರುಳಿನಲ್ಲಿ, ನಿದ್ದೆ ಮಾಡುತ್ತಿದ್ದಾ. ಚಂದ್ರನು ಒಂಟಿಬೆಟ್ಟದಿಂದ ಏರಿ, ಸೂರ್ಯನ ಮನೆಯ ಒಳಗೆ ನುಗ್ಗಿದ. ಸೂರ್ಯನು ಘೊರಕೆ ಹೊಡೆಯುತ್ತಿರುವಾಗ, ಚಂಡಾಮಮನು ಹತ್ತಿರ ಬಂದು, ಅವನ ಹನೆಯಮೇಲೆ ಸುತ್ತುತಿರುವ ಮೋಡವನ್ನು ಗ್ರಹಿಸಿ, ಮತ್ತೆ ಒಂಟಿಬೆಟ್ಟಕ್ಕೆ ಹಾರಿದ. ಅಲ್ಲಿ ಆ ಸನ್ನವಾದ ಆಲದ ಮರವು ಅವನಿಗೆ ಕಾಯುತ್ತಿತ್ತು.
ಕರಗಿದ ಹಿಮ ಮತ್ತೆ ಕದ್ದಿದ ಸಿಹಿನೀರಿನ ಜೊತೆ, ಚಂದ್ರನು ಕೆಲಸ ಪ್ರಾರಂಭಿಸಿದ. ರಾತ್ರಿ ಮುಗಿಯುವ ಮುಂಚೆ, ಅವನು ಈ ಪ್ರಪಂಚದ ಪ್ರತಿಯೋತ್ತಮ ಸೃಷ್ಟಿಯನ್ನು ಮುಗಿಸಿದ. ಇದು ನಮ್ಮ ನೀರಾ ನದಿ. ನೀರನದಿಯು ಆಲದ ಮರದ ಸುತ್ತಲೂ ಎಗರಿ, ಝಳ-ಝಳ ಅಂತ ಒಂಟಿಬೆಟ್ಟದ ಕೆಳಗೆ ಬಿತ್ತು. ಕಲ್ಪ-ಕಲ್ಪದ ಉರುಳಿದ ನಂತರ, ನೀರ ನದಿಯು ಬಹಳ ದೊಡ್ಡವಾಗಿ ಬೆಳೆಯುತ್ತದೆ. ಎಲ್ಲಾ ಜೀವಿಗಳ ಮೂಲವಾಗುತ್ತದೆ. ಆದರೆ ಮೊದಲು, ಮೊದಲು ನೀರಾ ನದಿಯು ಆಲದ ಮರದ ಸೇವೆ ಮಾಡುತ್ತದೆ.
ಹೀಗೆಯೇ ಕಥೆಯು ನಡೆಯಿತು. ಚಂದ್ರನು ಸೂರ್ಯನ ಗೃಹದೊಳಗೆ ನುಗ್ಗಿ, ಮೋಡವನ್ನು ಕಡಿಯುತ್ತಿದ್ದಾ. ಆ ನೀರಿನಿಂದ ನೀರಾ ನದಿಯನ್ನು ಪೋಷಿಸುತ್ತಿದ್ದಾ ಮತ್ತೆ ಪೋಷಿಸಿದ ನೀರ ನದಿಯು ಆಲದ ಮರವನ್ನು ಪೋಷಿಸುತ್ತಿತ್ತೂ. ಆಲದ ಮರವು ಉದ್ದವಾಗಿ, ಅಗಲವಾಗಿ, ಶಕ್ತಿಶಾಲಿ ಆಯಿತು. ದೊಡ್ಡದಾದ ಮೇಲೆ, ಅದು ಪ್ರಪಂಚಕ್ಕೆ ಮೊದಲೇನೆಯ ಹಣ್ಣು ನೀಡಿತು -- ಅಂಜೂರಿನ ಹಣ್ಣು. ಆ ಅಂಜೂರು ಮುರಿದು, ಅದರ ಒಳಗಿನಿಂದ ಬಂದಳು ನಮ್ಮ ಜನರ ಮೊದಲನೆಯನವಳು, ಆಕಾಸೈ, ಚಂದ್ರನ ಮೊಮ್ಮಗಳು.
ಆಕಸೈ ಅವಳ ಕಥೆಗಳನ್ನು ಬೇರೆ ಯಾವುದೋ ಇನ್ನೊಂದು ದಿನ ಹೇಳುತ್ತೇನೆ. ಹೇಳುವುದಕ್ಕೆ ಬಹಳಷ್ಟು ಇದೆ. ಆಲದ ಮರವು ಅವಳನ್ನು ಪಾಲಿಸದಳು. ಚಿಕ್ಕ ಮಗು ಆಗಿರುವಾಗ, ಭೂಮಿತಾಯಿಯೂ ಅವಳ ಜೇವನಸ್ನೇಹಿ ಆಗಿ, ನೀರಾತೀರದ ಪಕ್ಕದಲ್ಲಿ ಅವಳ ಜೊತೆ ಆಟ ಆಡುತ್ತಿದ್ದಳು. ಬಹಳಷ್ಟು ವರ್ಷಗಳ ನಂತರ ಅವಳು ಭೂಮಿತಾಯಿಯ ಪ್ರಪಂಚವನ್ನು ಸುತ್ತಿ, ಸುಟ್ಟಿದ ನೆಲವನ್ನು ಮತ್ತೆ ಗುಣಪಡಿಸಿದಳು. ಭೂಮಿತಾಯಿಂದ ಏರಿದ ಜ್ವಲಗಳನ್ನು ಸೋಲಿಸಿ, ಅವುಗಳನ್ನು ಪೂರ್ವಕ್ಕೆ ಗಡಿಪಾರಿಸಿದಳು. ಸೂರ್ಯನನ್ನೇ ಆಹ್ವಾನಿಸುವುದಕ್ಕೆ ಯೋಚಿಸಿದಳು, ಆದರೆ ಭಯಪಟ್ಟ ಚಂದ್ರ ಮತ್ತೆ ಆಲದ ಮರಗಳು ಅವಳನ್ನು ಹಿಂದೆ ತಿರುಗಿಸಿದರು.
ಆದರೆ ಆಕಾಸೈ ಮಿಡಳು ನಮ್ಮ ಜನರ ಮೊದಲಪೂರ್ವಜ. ವಯಸ್ಸಾದ ಮೇಲೆ, ಅವಳು ಆಲದ ಮರದೊಳಗೆ ಸಮಾಧಿ ಹುಡುಕಿದಳು, ಆರದೆ ಹೋಗುವ ಮುಂಚೆ ಚಂದಾಮಾಮದಿಂದ ಭರವಸೆ ಪಡೆದಳು. ಅವಳ ಜನರಿಗೆ ಯಾವಾಗಲೂ ಚಂದ್ರನ ಕ್ಷೇತ್ರದಲ್ಲಿ ಯಾವಾಗಲೂ ಮನೆ ಇರುತ್ತದೇ. ಇದರಿಂದಾಗಿ, ನಮ್ಮ ಜನರು ಈ ಭೂಮಿಯ ಪ್ರಪಂಚದ ಮೇಲೆ ಹುಟ್ಟಿ, ಭೂಮಿತಾಯಿಯ ಆಶೀರ್ವಾದ ಪಟ್ಟು, ಸಾವಿನ ನಂತರ ಆಕಾಶದ ತಾರೆಯ ಮಧ್ಯದಲ್ಲಿ ಮನೆ ಮಾಡುತ್ತಾರೆ. ಚಂದಾಮಾಮ ಕದ್ದ ನೀರು ಅವರಿಗೆ ಬರುತ್ತದೆ, ಮತ್ತೆ ಅವರಿಂದ ನಮಗೆ.
___
ಇಲ್ಲಿ ಕಥೆಗಾರಿಯು ತಡೆದಳು "ಕಥೆ ನಾನು ಮುಂದಿನ ವಾರಾ..."
"ಬೇಡಾ! ಬೇಡಾ!" ನಾವು ಪ್ರತಿಭಟಿಸಿದವು. "ಮುಂದಿನ ವಾರ, ತುಂಬಾ ದೂರ!"
"ಆದರೆ..." ಅವಳು ಶುರುಮಾಡಿದಳು.
"ದಯವಿಟ್ಟು! ನಮಗೆ ಕಾಯಕ್ಕೆ ಆಗಲ್ಲಾ!"
ಅವಳು ನಕ್ಕಿದಳು
"ಸರಿ." ಅಂದಳು. "ಇವತ್ತೇ ಮುಗಿಸೋಣ."
ನನ್ನ ಮಾತು: ಈ ಕಥೆಯು "ದೊಡ್ಡ ನಾಡು" ಪ್ರಪಂಚದ ಭಾಗ. ದೊಡ್ಡ ನಾಡು ಪ್ರಪಂಚವು ಒಂದು ಕಾಲ್ಪನಿಕ ಪ್ರಪಂಚ. ನನ್ನ ಮೊದಲನೆಯ (ಈಗ ಬರೆಯುತ್ತಿರುವ) ಕಾದಂಬರಿಯು ಈ ಪ್ರಪಂಚದಲ್ಲಿ ಸ್ಥಾಪಿಸಿದೆನೆ. ಗನದ ನದಿ ಮತ್ತು ಆಲದ ಮರದ ಕಥೆಯು, ದೊಡ್ಡನಾಡುವಿನಲ್ಲಿ ವಾಸಿಸುತ್ತಿರುವ ಒಂದು ಜನಾಂಗದ ಹಳೆ ಪುರಾಣ.
[English Version]
The week felt longer than usual. Though many of us hadn't cared much for the story initially, we became more invested in it over time. As we went about our work, we wondered what the Moon did. We debated why the Sun and Moon no longer fight. When did our ancestors enter this story? As the week drew to an end, we gathered around the fire once more, eagerness writ on our faces. The storyteller smiled and began:
My dear people, I had told you about the Earth and how she drew sweetness out of the Salt Waters. I told you about the Winds and how they wove the waters of the first springs into sheets for soaking the ground, to prepare for life. I told you about the Sun and how he stole these waters from them. I told you about the Moon and how he was commanded by the Earth to return these stolen waters.
But the Moon, my dear people, is not a warrior. He does not know how to fight. Even if he could have fought, he would have been no match for the Sun, his older and stronger brother. After all, those who commit crimes are also those unafraid of challenges. And often, there are good reasons for such absence of fear.
How then could the Moon complete his task? Pondering his role, he circled heaven's firmaments. The heat of the scorched earth burnt his countenance and addled his senses. He could not think straight. He needed a place to rest.
It was then that he came upon the Lone Mountain, the greatest and tallest of the peaks in our land. Here, he paused in wonder. Do you remember me telling you about the Winds and the sheets of water they wove out of the first springs? How they flung these sheets far and wide across Earth's realm? The Lone Mountain had also been soaked.
But lo! Listen! Our Lone Mountain was tall. It stood so high that its peak had been too far above the ground when the Sun burnt the Winds and the ground with his grasp. Some water remained on the peak! The Mountain still feared the Sun though. And in its fear, it had turned cold, freezing the waters into snow. Pale and gleaming, the snows of the Lone Mountain winked back at the Moon, cooling his senses on that hot night.
Trembling with anticipation, the Moon descended. He set himself below the snows, on a shoulder of the Lone Mountain, just above the darkened valleys. Some of the snow had melted at this height and had pooled into a hollow in the ground. The Moon scooped this out and soaked a patch of earth with it. Once the earth had been soaked, he planted the first of his seeds. The seed of the Banyan Tree.
You must remember, dear people, that this was the first seed of life. It was too weak to grow alone. Hence, the Moon cut off one of his moonbeams and infused it with the Earth's sweet water, before thrusting it into the ground to act as the seed's home. Thus protected by water and moonlight, the seed sprang to life.
Before the night even reached its peak, the first roots spread down. The first branches thrust themselves into the sky. The First of Life would grow to become the greatest of all trees in Earth's realm, but its children would always carry the original weakness. This is why Banyan seeds never grow in the ground -- they always need the protection of another tree, its water, and moonlight.
Thus, the First of Life emerged, on that lonely shoulder of a lonely mountain on a burnt and broken earth. The Moon was filled with fear. How could his child survive these dreadful times? It was then that he got his courage, the desperate courage that comes to every parent when they need to protect their child. He could not fight the Sun. But he could do what the Sun himself had done. He could steal the waters back from him.
The Sun had gone to sleep on that dark, starless night. The Moon rose into the skies and swiftly ran west, to the Sun's night home. As the Sun snored, the Moon crept below the horizon, into his home. The waters clouded the Sun's brow, turning his fiery countenance grey. The Moon reached out, gathered some of the clouds and ran back above the horizon. He crossed back over the black skies to the Lone Mountain, where the slender young Banyan Tree awaited him.
With melted snow and the stolen water, the Moon set to work. Before the night ended, he completed his greatest creation on Earth's realm. The Neera river sprang to life around the Banyan Tree and tumbled down the slope. Over the years, the Neera would grow, far beyond anything the Moon imagined it to be and become the source of life for all of us. But always, always, the Neera would first serve the Banyan Tree.
Thus it continued, night after night. The Moon would sneak into the Sun's home and steal some of the clouds around his brow. He would replenish the Neera river, which in turn would replenish the Banyan Tree. The Banyan grew tall, wide, and strong. When fully grown, soaked with the waters of the Neera and soil of the Earth's realm, she gave the world the First Fruit, a fig. When the fig cracked open, out climbed Aakasai, the First of Our People, grandchild of the Moon.
The story of Aakasai is for another day, for one night will not do it justice. There is too much to tell. The Banyan Tree brought her up in her first years, on stolen waters from the Moon. The Earth befriended her. On many nights, Aakasai and the Earth would play beneath the Banyan, on the banks of the Neera. Many years later, she would cross the Earth's realm and heal the burnt grounds with the Moon's help. She fought the Earth's fires and banished them to the East. She even considered challenging the Sun, but was dissuaded by the frightened Moon and the Banyan Tree.
But Aakasai was also the parent of our people. Even as she grew old and retired into the arms of the Banyan Tree, she extracted a promise from her grandfather. Her people would always have a home in the Moon's realms. Thus, her people grew, partaking of the Earth's gifts before ascending to the skies where the stars formed their hearths. The Moon continued to steal water at night and gift them to our people, both on earth and in the skies. Back then, there was enough for everyone.
___
The storyteller paused. "For the rest of the story..."
"No!" we protested. "Too long! Too long! We cannot wait another week!"
"But..." she began, but we protested again.
"Please! We cannot wait..."
The storyteller smiled.
"All right." she said. "I'll finish it tonight."
___
Author's Note: The above tale is part of the Dodda Nadu Universe, a fictional world where my first novel (which I'm currently writing) is set. The River in the Sky and the Banyan Tree is a legend that's popular among a particular community of people in that Universe.
ಗಗನದ ನದಿ ಮತ್ತು ಆಲದ ಮರ (ಭಾಗ 3) | The River in the Sky and the Banyan Tree (Part 3) by Amogh Arakali is licensed under a Creative Commons Attribution-NonCommercial-NoDerivatives 4.0 International License.
Write a comment ...