ಗಗನದ ನದಿ ಮತ್ತು ಆಲದ ಮರ (ಭಾಗ 4) | The River in the Sky and the Banyan Tree (Part 4)

[ಕನ್ನಡ ವಿಭಾಗ | For the English version, please scroll down]

ಕಥೆಗಾರಿಯು ಮತ್ತೆ ಪ್ರಾರಂಭಿಸಿದಳು:

ಪ್ರಿಯವಾದ ಜನರೇ, ಇವೆಲ್ಲಾ ನಡೆಯುತ್ತಿರುವಾಗ ಸೂರ್ಯನು ಯೇನು ಮಾಡುತ್ತಿದ್ದಾ ಅಂತ ನಿಮಗೆ ಕುತೂಹಲ ಇಲ್ಲವೇ?

ಯೇನಾಗುತ್ತಿತ್ತು ಅಂದರೆ, ಸೂರ್ಯನು ಕಡಿಮೆ ಆಗುತ್ತಿರುವ ಮೋಡ-ಜಲವನ್ನು ಗಮನಿಸಿದ್ದ. ಆದರೆ, ಆ ಕಾಲದಲ್ಲಿ ಸೂರ್ಯನು ಅಹಂಕಾರಪಟ್ಟ ಯುವಕನಂತಾಗಿದ್ದಾ. ಅವನಿಂದ ಯಾರೋ ಸಿಹಿನೀರನ್ನು ಕಾಡಿಯಬಹುದು ಅಂತ ಕಲ್ಪನೆನೇ ಬರಲಿಲ್ಲಾ. ಅವನಿಗೆ ನಿರಾಶೆಯೂ ಆಗಿತ್ತು. ಭೂಮಿಟಾಯಿ ಅಥವಾ ಚಂದಾಮಾಮಣ ತರಹ ಅವನಿಗೆ ಜೀವನ ಚಿಗುರಿಸುವ ಮಾಯಾಶಕ್ತಿ ಇರಲಿಲ್ಲ. ಒಂದು ದಿನ, ಹಣೆಯ ಮೇಲೆ ಕಿರಿಕಿರಿಯ ಗೇಟುಗಳನ್ನು ಎತ್ತು ಕೊಂಡು, ಪುನಹ ಭೂಮಿತಾಯಿಯ ಪ್ರಪಂಚ ಕಡೆ ನೋಡಿದ.

ಅವನ ಆಶ್ಚರ್ಯ ಬಗ್ಗೆ ಸ್ವಲ್ಪ ಯೋಚಿಸಿ! ಇದು ಆಕಾಸೈ ನೆಲವನ್ನು ಗುಣಮಟ್ಟಕ್ಕೆ ತಂದಮೇಲೆ, ಜ್ವಾಲಾಗಳನ್ನು ಸೋಲಿಸಿದ ಮೇಲೆ. ಅವಳ ಜನರು ನಿರ್ಭಯದಿಂದ ಭೂಮಿಯ ಮೇಲೆ ನಡೆಯುತ್ತಿದ್ದರು. ಚಂದ್ರನು ಆಲದ ಮರದ ನಂತರ ಬೇರೆ ಬೇರೆ ಬೀಜಗಳನ್ನು ನೆಲದೊಳಗೆ ನೆಟ್ಟಿದ್ದಾ. ಭೂಮಿಯ ಪ್ರಪಂಚವೂ ಮರ, ಗಿಡ, ಪ್ರಾಣಿ, ಪಕ್ಷಿಗಳಿಂದ ತುಂಬಿತ್ತು. ಉಪ್ಪಿನ್ನೀರುಗಳಲ್ಲಿ ಮೀನುಗಳು ಈಜುತ್ತಿದ್ದವು. ಇಡರೆಲ್ಲಾದ ಮಧ್ಯದಲ್ಲಿ ಆ ಮಹಾ ನೀರ ನದಿಯು ಭೂಮಿಯ ಮೇಲೆ ಸುತ್ತಿ, ಉಪ್ಪಿನ್ನೇರಿನೊಳಗೆ ಸುರಿಯುತಿತ್ತು.

ಕೋಪದಿಂದ ಘರ್ಜಿಸಿ, ಸೂರ್ಯ ಪುನಹ ನೆಲಕ್ಕೆ ಬಂದ. ಅವನಿಗೆ ಗೊತ್ತಿತ್ತು, ಯಾರೋ ಅವನಿಗೆ ಮೋಸ ಮಾಡಿದ್ದರು. ನೀರ ನದಿಯ ಸಿಹಿನೀರು ಅದೇ ಅವನು ಕದ್ದಿದ್ದ ಸಿಹಿನೀರಲ್ಲವೇ? ನದಿ ಒಳಗೆ ಹೇಗೆ ಬಂದವು? ಕ್ರೋಧದಿಂದ ಸುಡಿಯುತ್ತಾ, ಒಂಟಿಬೆಟ್ಟಕ್ಕೆ ಇಳಿದ. ನದಿಯ ಮೂಲಕ್ಕೆ ಇಳಿದು, ಮತ್ತೆ ಸಿಹಿನೀರನ್ನು ಬಂಧಿಸಿ ಮೇಲೆ ಎಳೆಯುವ ನಿರ್ಧಾರವಿತ್ತು.

ಆದರೆ ಇದು ಹಳೆಗಾಲದ ದಿನವಲ್ಲ. ಆಕಸೈ ಪ್ರಪಂಚವನ್ನು ಬದಲಾಯಿಸಿದ್ದಳು. ಅವಳ ಆತ್ಮವು ಇನ್ನೂ ಅವಳ ತಾಯಿ, ಆಲದ ಮರದೊಳಗೆ ಹರಡಿತ್ತು. ಚಂದ್ರನ ತ್ಯಾಗ ಆಲದ ಮರದ ಜೀವರಸದಲ್ಲಿ ಕುದಿಯುತ್ತಿತ್ತು. ಮುಖ್ಯವಾಗಿ, ಭೂಮಿತಾಯಿಯೂ ಅಲ್ಲೇ ಇದ್ದಳು. ಆಕಾಸೈ ನೆನಪು ಇನ್ನೂ ಅವಳಹತ್ತಿರ ಇತ್ತು. ಆಕಾಸೈ ಇನ ತಾಯಿ ಆಲಾದ ಮರ. ಮುಖ್ಯವಾಗಿ, ಭೂಮಿತಾಯಿಯು ಸೂರ್ಯದ ಅಪರಾಧ ನೆನಪಿತ್ತು.

ಭೂಮಿತಾಯಿಯ ಶಕ್ತಿಯೂ ಆಲದ ಮರದೊಳಗೆ ಸೇರಿತು. ಮರವನ್ನು ಮಹಾಶಕ್ತಿಶಾಲಿಯಾಗಿ ಮಾಡಿತು. ಆಲದ ಮರವು ಬೆಳೆಯಿತು. ರೊಂಭೆಯಿಂದ ಬೇರುಗಳು ಚಿಗುರಿದವು ಮತ್ತೆ ಬೇರುಗಳಿಂದ ರೊಂಭೆ. ಮರವೇ ಕಾಡು ಆಯಿತು, ಭೂಮಿಯ ಪ್ರತಿ ಉತ್ತಮವಾದ, ಹೆಚ್ಚು ದೊಡ್ಡವಾದ ಕಾಡು. ನೀರಾತೀರದಲ್ಲಿ ಬೆಳೆಯಿತು. ಮೂಲದಿಂದ ಉಪ್ಪಿನನೀರಿನವರೆಗೆ ಈ ಒಂದುಮರದಕಾಡು ಹರಡಿತು. ನೀರಾ ನದಿಯ ಮೇಲೆ ರೊಂಭೆ ಬೆಳೆದು ಸೂರ್ಯನ ಬೆಳಕನ್ನು ಹಾದಿಕಟ್ಟಿತು. ಸೂರ್ಯ ನೀರಾ ನದಿಯನ್ನು ಮುಟ್ಟುವುದಕ್ಕೆ ಆಗಲಿಲ್ಲಾ.

ಗೊಂದಲವಾದ ಸೂರ್ಯನು ತಡೆದನು. ಅಷ್ಟರಲ್ಲೇ, ಆಲದ ಮರವು ಇನ್ನೂ ಎತ್ತರವಾಗಿ ಬೆಳೆದಳು. ರೊಂಭೆಗಳನ್ನು ಓಲಾಡಿಸಿ, ಗಾಳಿಗಲ್ಲನ್ನು ಕರೆದಳು. ಸೂರ್ಯನ ಅಪರಾಧವನ್ನು ನೆನಪಿಸಿಕೊಂಡು, ಗಾಳಿಗಳು ಕೂಗಿದರು. ರೊಂಭೆ ಮಧ್ಯೆ ಇಂದ ಏರಿ, ಸೂರ್ಯನನ್ನು ಮತ್ತೆ ಆಕಾಶಕ್ಕೆ ನೂಕಿದರು. ಅವನ ಪಶ್ಚಿಮದ ಮನೆ ಒಳಗೆ ಓಡಿ, ಮಿಕ್ಕಿದ್ದ ಮೋಡಗಳನ್ನು ಎತ್ತು ಕೊಂಡು, ಮುಕ್ತಗೊಳಿಸಿದರು. ಚಂದ್ರನ ತರಹ ಅವರು ಮಿಕ್ಕಿದ್ದ ಮೋಡಗಳನ್ನು ನೀರಾ ನದಿಗೆ ತರಲಿಲ್ಲಾ, ಆದರೆ, ಮೋಡಗಳನ್ನು ಪ್ರಪಂಚದ ಎಲ್ಲಾ ದಿಷೆಗಳಲ್ಲಿ ಕಳುಹಿಸಿ, ಮಳೆ ಮಾಡಿದರೂ.

ಬೆರಗುಗೊಳಿಸಿದ ಸೂರ್ಯನು ಮತ್ತೆ ಆಕಾಶಕ್ಕೆ ಏರಿದಾಗ, ಅವನಿಗೆ ಆಲದ ಮರ ಕಂಡಿದಳು.

"ಏಯ್ ಸೂರ್ಯನೆ, ಭೂಮಿತಾಯಿಯ ಸಿಹಿನೀರನ್ನು ಕಡಿಯುವುದಕ್ಕೆ ನೀನು ಯಾರು?" ಎಂದು ಮರ ಕೇಳಿದಳು. "ನನ್ನ ಮಕ್ಕಳಿಂದ ಸಿಹಿನೀರು ಕೀಳುವ ಅಧಿಕಾರಿ ನಿನಗೆ ಯಾರು ಕೊಟ್ಟರು?"

ಇದನ್ನು ಕೇಳಿದಾಗ ಸೂರ್ಯನ ಕೋಪ ಮತ್ತೆ ಸಿಡಿಯಿತು.

"ನಾನು ಯಾರ?" ಅಂತ ಕೂಗಿದ. "ಯಾವ ಅಧಿಕಾರಿ ಇಂದಾನ? ಮೊದಲು ನೀನು ಉತ್ತರಿಸು...ಯಾವ ಅಧಿಕಾರಿ ಇಂದ ಭೂಮಿಯು ನನಗೆ ಜೀವ ಚಿಗುರಿಸುವ ಕಲೆ ನಿರಾಕರಿಸುತ್ತಾಳೆ? ಅವಳು ಸಿಹಿನೀರಿನ ಬುಗ್ಗೆಗಳು ಮಾಡಿದಳು. ಗಾಳಿಗಳಿಗೆ ಸಿಹಿನೀರಿನ ಕಂಬಳಿಗಳನ್ನ ಮಾಡುವ ಕೆಲಸ ಕೊಟ್ಟಳು. ಚಂದ್ರನಿಗೆ ಬೀಜ ರಚಿಸುವ ಕೆಲಸ ಕೊಟ್ಟಳು. ಈ ಮಹಾ ನಾಟಕದಲ್ಲಿ ನನ್ನ ಪಾತ್ರ ಯೆಲ್ಲಿ? ನಾನು ಅಷ್ಟು ನಾಚಿಕೆಗೇಡಿನ?"

"ಹೇಳು, ಆಲದ ಮರ, ಹೇಳು! ನನಗೆ ಜೀವನದ ರಚಿಸುವ ಹಕ್ಕು ಇಲ್ಲವೇ? ನಾನು ಯಾಕೆ ಆ ಸಿಹಿನೀರನ್ನು ಕಾಡಿಯಬಾರದು?"

ಸೂರ್ಯನ ಈ ಮಾತನ್ನು ಕೇಳಿ, ಭೂಮಿಯು ಆಲದ ಮರದ ರೊಂಭೆಗಳನ್ನು ಹತ್ತಿ, ಸೂರ್ಯನತ್ತಿರ ಕುಳಿತು, ಮಾತು ಶುರು ಮಾಡಿದಳು.

"ಅಯ್ಯೋ ಸೂರ್ಯನೆ." ಎಂದಳು. "ಅಯ್ಯೋ, ಸುಡಿಯುವ ಸೂರ್ಯನೆ. ಜೀವನವನ್ನು ನೀನು ರಚಿಸಬೇಕೇ? ಜೀವನದ ರಚಿಸುವ ರಂಗಸ್ಥಳದಲ್ಲಿ ನಿನಗೆ ಪಾತ್ರ ಬೇಕಿತ್ತೆ? ಹಾಗಾದರೆ, ನೀನು ಇದನ್ನು ಯಾಕೆ ಮುಂಚೆ ನೇ ಕೇಳಲಿಲ್ಲಾ?"

ಇದನ್ನು ಕೇಳಿ, ಸೂರ್ಯನ ಮಖ ನಾಚಿಕೆ ಇಂದ ಕೆಂಪಾಯಿತು. ಯುಗಯುಗಾಂತದ ಮೇಲೆ, ಅವನು ಮಾಡಿದ ಎಲ್ಲಾ ಕ್ರಿಯಗಳನ್ನು ಒಟ್ಟಿಗೆ ನೋಡಿದರೆ, ಆ ಕ್ರಿಯೆಗಳಲ್ಲಿ ಬರೀ ಈ ಒಂದು ಕಾರ್ಯ ಅವನು ಮಾಡಿರಲಿಲ್ಲಾ. ಅಯ್ಯೋ ನನ್ನ ಜನರೇ, ಕೋಪ-ಕ್ರೋಧಕ್ಕೆ ಬಹಳ ಕಾರಣಗಳಿರುತ್ತವೆ. ಕೆಲವು ಸಲ ಕೋಪಕ್ಕೆ ಸಮರ್ಥನೆಯೂ ಇರುತ್ತದೆ. ಆದರೆ ಕೋಪವನ್ನು ನಮ್ಮಿಂದ ಆಚೆ ಬಿಡುವ ಮುಂಚೆ, ಕೋಪ ಬಿಟ್ಟು ಬೇರೆ ಎಲ್ಲಾ ದಾರಿಗಳ ಮೇಲೆ ಹೆಜ್ಜೆ ಇಟ್ಟಿದೇವ ಇಲ್ಲವೋ ಅಂತ ಕೇಳಬೇಕು. ಇದೇ ಸೂರ್ಯನ ಮಹಾ ತಪ್ಪು ಆಗಿತ್ತು.

"ಅದಿರಲಿ." ಆಲದ ಮರ ಹೇಳಿದಳು. "ಸೂರ್ಯನ ಮಹಾ ತಪ್ಪು ಇದಿರ ಬಹುದು. ಆದರೆ ಸಣ್ಣ ತಪ್ಪು ನಿಮ್ಮದೂ ಇದೆ, ಭೂಮಿತಾಯಿಯೇ. ಜೀವನವನ್ನು ರಚಿಸುವಾಗ ಈ ಪ್ರಪಂಚದಲ್ಲಿ ಇದ್ದಿದ್ದು ಬರೀ ಎರಡು ಅಂಶ ಮತ್ತೆ ನಾಲ್ಕು ಘಟಕಗಳು ಇದ್ದವು -- ಜಲ, ಜ್ವಾಲಾ, ಭೂಮಿ, ಚಂದ್ರ, ಗಾಳಿಗಳು, ಸೂರ್ಯ. ಜೀವನದ ರಚನೆಯಲ್ಲಿ ಬರೀ ಸೂರ್ಯನನ್ನು ಯಾಕೆ ಮರೆತು ಹೋದರಿ? ಅದೇನು ಅಷ್ಟು ಕಷ್ಟದ ಕೆಲಸವಾ?"

ಇವಾಗ ಭೂಮಿಗೆ ನಾಚಿಕೆ ಆಯಿತು. ಕೆಲವು ಸಲ ಜನರೇ, ನಮ್ಮ ಕಣ್ಣು ಮುಂದೆ ಇರುವ ಸ್ತಿಥಿಯನ್ನೇ ಮರೆತು ಬಿಡುತ್ತೇವೆ. ನಮ್ಮ ತಪ್ಪಾಗಿಲ್ಲದಿದ್ದರು, ನಮ್ಮ ನಿರ್ಲಕ್ಷ್ಯದ ಹಣ್ಣನ್ನು ನಾವು ತಿನ್ನಲೇ ಬೇಕು.

ಆವಾಗಲೇ, ಅವರಿಬ್ಬರ ಮಧ್ಯದಲ್ಲಿ ಒಪ್ಪಂದ ಚಿಗುರಿತು. ಬಹಳ ಜೀವನ ಆಗಲೇ ಭೂಮಿ-ಚಂದ್ರ ರಚಿಸಿದ್ದಾಯಿತು ಆದರೆ ಇನ್ನೂ ಬಹಳಷ್ಟು ಜೀವನವೂ ಮಾಡುವ ಕೆಲಸ ಉಳಿದಿತ್ತು. ಈ ಕೆಲಸವೂ ಅವರು ಸೂರ್ಯನಿಗೆ ಕೊಟ್ಟರು. ಉಪ್ಪುನೀರಿಂದ ಸಿಹಿನೀರನ್ನು ಹೊರತಗೆಯಲು ಭೂಮಿಯು ಸೂರ್ಯನಿಗೆ ಹೇಳಿಕೊಟ್ಟಳು. ಸೂರ್ಯನು ಈ ಹೊಸ ಸಿಹಿನೀರನ್ನು ಆಕಾಶಕ್ಕೆ ಏರಿದನು. ಇದರಿಂದ ಮೋಡಾ ಮಾಡಿ, ಮೋಡವನ್ನು ಗಾಳಿಗೆ ಕೊಟ್ಟು ಮಳೆ ಸುರಿಸುವುದಕ್ಕೆ ಹೇಳಿದನು.

ಚಂದ್ರನು ಸೂರ್ಯನಿಗೆ ಬೀಜ ರಚಿಸುವ ಕಲೆ ಕಲಿಸಿದನು. ಸೂರ್ಯನ ಬೆಳಕು ಚಂದ್ರನಿಗಿಂತ ಶಕ್ತಿಶಾಲಿ ಆಗಿದ್ದರಿಂದ, ಸೂರ್ಯಬೀಜದೊಳಗೆ ಹೆಚ್ಚು ಶಕ್ತಿ ಬಂದಿತು. ಇದರಿಂದ ಹೊಸ ಜೀವನ ಬಂತು. ಆಕಾಸೈ ಇನ ಕಾಲದ ನಂತರ ಇಷ್ಟು ಶಕ್ತಿಶಾಲಿಯ ಜೀವಿಗಳು ಯಾರೂ ನೋಡಿರಲಿಲ್ಲಾ. ಆದರೆ ಈ ಸೂರ್ಯಮಕ್ಕಳಲ್ಲಿ ಸೂರ್ಯನ ಭೆಂಕಿ ಉರಿಯಿತು. ಆ ಭೆಂಕಿಯ ಕಾರಂದಿಂದ ಸೂರ್ಯಮಕ್ಕಳು ಜೋರಾಗಿ, ಉದಾರವಾಗಿ, ಧೈರ್ಯವಾಗಿದ್ದರೂ. ಆದರೂ, ಅದೇ ಭೆಂಕಿಯ ಕಾರಣದಿಂದ ಸೂರ್ಯಮಕ್ಕಳಿಗೆ ಕೋಪ, ಕ್ರೋಧ, ಮತ್ತು ಅಸೂಯೆಯು ಭೇಗ ಬರುತಿತ್ತೂ. ಬಹಳ ಯುಗಗಳ ನಂತರ, ಅವರು ಆಲದ ಮರ ಮಾಡಿದ ಕಾಡನ್ನು ಕಡೆದು, ಪುನಹ ನೀರ ನದಿಯ ನೀರನ್ನು ಕೂಡಿದರು. ಆಗ ಆಲದ ಮರವು ಅವಳ ಮೊದಲ ರೂಪವನ್ನು ಧರಿಸಿ, ಒಂಟಿಬೆಟ್ಟಕ್ಕೆ ವಾಪಸ್ ಹೋದಳು. ಆದರೆ ಇದು ಇನ್ನೊಂದು ದಿನದ ಕಥೆ. ಇದಕ್ಕಿಣ ಮುಂಚೆ ಬಹಳ ಯುಗಗಳಲ್ಲಿ ಶಾಂತಿ ನಡೆಯಿತು.

ಇದರೆಲ್ಲಾದ ಮಧ್ಯದಲ್ಲಿ, ಒಂದು ಕೋಣೆ ಕೆಲಸ ಉಳಿದಿತ್ತು. ನಮ್ಮ ಜನರಿಗೆ ನೀರಾ ನದಿಯ ನೀರಿನಿಂದ ಹೆಚ್ಚು ಉದ್ಧಾರವಾಗುತಿತ್ತು. ಇದರಿಂದಾಗಿ, ಭೂಮಿಯ ಮೇಲೆ ಇರುವ ಜನರು ನೀರಾ ನದಿಯ ನೀರನ್ನು ಉಪಯೋಗಿಸಿದ ನಂತರ, ಆಲದ ಮರವು ಸಿಹಿನೀರನ್ನು ಸೂರ್ಯನಿಗೆ ಕೊಡುತ್ತಿದ್ದಳು. ಸೂರ್ಯನು ಈ ನೀರನ್ನು ಚಂದ್ರನಿಗೆ ಕೊಡುತ್ತಿದ್ದ ಮತ್ತ ಚಂದ್ರ ನಮ್ಮ ಪೂರ್ವಜರಿಗೆ. ನಮ್ಮ ಪೂರ್ವಜರು ಈ ನೀರನ್ನು ಹಿಡಿದು ನಮಗೆ ಮತ್ತೆ ಈ ನೀರ ಬೇಕಾದ ಸಮಯಕ್ಕೆ ಕಾಯುತ್ತಿದ್ದರು. ಗಗನದ ನದಿಯನ್ನು ರಚಿಸಿದರು.

ನೋಡಿ ಜನರೇ, ಆ ಗಗನದ ನದಿ! ನೋಡಿ ಯಾವ ಕಡೆ ಹರಿಯುತ್ತದೆ! ಒಂಟಿಬೆಟ್ಟದ ಕಡೆಗೆ. ಇದು ಕಾಕತಾಳೀಯವಲ್ಲ. ಯಾಕೆಂದರೆ, ಆ ಗಗನದ ನದಿಯು ನಮ್ಮ ನೀರಾ ನಾಡಿಯೇ ಅಷ್ಟೇ. ನಮ್ಮ ಪೂರ್ವಜರಾ ಓಲೆಗಳಿಂದ ಏರಿ, ಗಗನದ ನದಿಯಂತೆ ಹರಿದು, ಒಂಟಿಬೆಟ್ಟಕ್ಕೆ ಹೋಗಿ, ಆಲದ ಮರದ ಹತ್ತಿರ ನೀರಾ ನದಿಯು ಇಳಿಯುತ್ತಾಳೆ. ಆಲದ ಮರವು, ನಮ್ಮ ನೀರಾ ನದಿಯನ್ನು ಹಿಡಿದು, ಭೂಮಿಗೆ ಇಳಿಸುತ್ತಾಳೆ.

ಹೀಗೆ, ಚಕ್ರವು ಪುನರಾವರ್ತಿಸುತ್ತದೆ. ಹೀಗಾಗಿ, ನಾವು ಪ್ರಪಂಚದೊಂದಿಗೆ ಸಾಮರಸ್ಯದಿಂದ ಬದುಕುತ್ತೇವೆ.

___
ಈ ಎರಡು ಮಾತಿನಿಂದ ಕಥೆಗಾರಿಯೂ ಕಥೆ ಮುಗಿಸಿದಳು.

ನನ್ನ ಮಾತು: ಈ ಕಥೆಯು "ದೊಡ್ಡ ನಾಡು" ಪ್ರಪಂಚದ ಭಾಗ. ದೊಡ್ಡ ನಾಡು ಪ್ರಪಂಚವು ಒಂದು ಕಾಲ್ಪನಿಕ ಪ್ರಪಂಚ. ನನ್ನ ಮೊದಲನೆಯ (ಈಗ ಬರೆಯುತ್ತಿರುವ) ಕಾದಂಬರಿಯು ಈ ಪ್ರಪಂಚದಲ್ಲಿ ಸ್ಥಾಪಿಸಿದೆನೆ. ಗನದ ನದಿ ಮತ್ತು ಆಲದ ಮರದ ಕಥೆಯು, ದೊಡ್ಡನಾಡುವಿನಲ್ಲಿ ವಾಸಿಸುತ್ತಿರುವ ಒಂದು ಜನಾಂಗದ ಹಳೆ ಪುರಾಣ.


[English Version]

The Storyteller thus continued...

My dear people, you may have wondered what the Sun was doing while all this was going on.

You see, he had noticed that he was losing his stolen waters. But back then, the Sun had been a younger and more arrogant being. He could not imagine someone was clever enough or brave enough to steal from him. He was also frustrated. Unlike the Earth or Moon, he did not have the power to make life. One day, scowling with irritation, he looked back at the Earth's realm.

Imagine his surprise! This was long after Aakasai had healed the ground and defeated the Earth's fires. Her people walked freely on the land. The Moon had planted other seeds in the ground, and they had all sprung to life. The Earth's realm was filled with trees and plants and animals and birds. The Salt Waters were brimming with fish. And at the centre of it all, the mighty Neera river wound over the land, draining back into the Salt.

With a roar of rage, the Sun descended to the ground once more. He knew something was wrong, that someone had cheated. Surely, the waters of the Neera were the same as the ones he had seized? How had they ended up here? Burning with fury, he swept down to the Lone Mountain, to the source of our river. Once again, he sought to steal back the Earth's waters and drag the Neera back with him.

But these were not the days of old. Aakasai had changed the land. Even though she had long disappeared into the Banyan Tree's arms, her spirit still suffused her mother's branches. The Moon was yet to rise, but his light of life, the fruits of his great sacrifice, still moved with the tree's sap. And most of all, there was the Earth. Her soil nourished the tree. The Earth remembered her days with Aakasai. She remembered how the Banyan Tree gave Aakasai to the world. Most of all, she remembered the Sun's original crime, and how she had long sought justice for it.

The Earth's mighty power spread throughout the Banyan Tree, strengthening her beyond any other form of life. Roots grew from her branches and branches grew from her roots. With a thundering crack, the Banyan Tree grew. It grew and grew and grew. It reached into the sky. It spread across the land. A tree that became a forest, the mightiest forest in all the land, one that spread all along the Neera. From headwaters to coast, roots dug into the ground and branches sprang overheard. The Sun could not touch the Neera's waters.

Even as the Sun paused in confusion, the Banyan Tree grew taller. With a mighty sweep of all its branches, the Tree summoned the Winds. Remembering the Sun's ancient crime, the Winds howled. They swept up from the Banyan Tree's branches and flung the Sun back into the heavens. Sweeping into his home, they gathered the last of the clouds and set them free. Unlike the Moon, they didn't channel the waters into the Neera. Instead the clouds burst above the ground to create the first rains, blocking out the Sun as they nourished the lands.

The Sun crept back over the horizon, stunned by the response to his act. As his beaten eyes swept over Earth's realm, they caught sight of the mighty Banyan Tree. It was then that the Banyan Tree spoke to him.

"Who are you, O Sun, to steal the waters of the Earth?" demanded the Tree. "Who are you to deny my children, the Moon's grandchildren, the ancient right that was given to them by the Earth, in her own realm?"

At this, the Sun's old resentment burst out.

"Who am I?" he cried in rage. "By what law does the Earth deny me the right to make life? She made the springs. She brought in the Winds to soak the lands with water. She asked the Moon to make the first seeds. Where was I in her grand scheme? Why would she leave me out of the making of life? Am I that unworthy, that disgraceful, that unwanted?"

"Why, O Banyan Tree, why shouldn't I steal those waters, if the Earth began her scheme by denying me the same?"

At this, the Earth climbed up the branches of the Banyan Tree to speak to the Sun.

"O fiery one." she said. "All you had to do was ask."

At this, the Sun's face reddened with embarrassment. He realised that of all the actions he had taken over the years, the one thing he hadn't done was ask whether he could take part. O my dear people, anger can come from many places, and is sometimes justified. But before we unleash our rage on anyone or anything, we need to ask if we have done all we could to avoid it. The Sun had failed to do so.

"Even so." said the Banyan Tree. "The fault is largely the Sun's, but not his alone. After all, before life was born, all the world was made up of two elements -- water and fire --- and four types of beings. The Earth, the Moon, the Winds, the Sun. The Sun was the only one left out of the making of life. Was it that hard to notice his absence?"

It was now the Earth's turn to feel shame. Sometimes, O people, we neglect that which lies right in front of our eyes. And even if it's not always our fault, we may still reap the fruits of our neglect.

It was there, among the branches of the Banyan Tree, that the Earth and the Sun finally called truce. Much life had already been created, but much life was still unmade. The task of creating all remaining life was given to the Sun. The Earth taught him to how to draw sweetness from the Salt Waters and he pulled fresh waters into the sky. These, he made into clouds, which he gave to the Winds to carry over the Earth and make rain.

The Moon taught him to make seeds. His own light, stronger and more powerful than the Moon's, infused the new seeds he created with strength, leading to tall forms of life which could stand on their own. Not since Aakasai had such beings emerged on the Earth. But unlike the Moon's descendants, the Sun's children also carried his heat. This meant that his children could be both generous and bold, but also quick to temper and madness. Many years later, they would cut down the Banyan Forest downstream and regain the banks of the Neera there. The Banyan Tree would retreat to her original form on the Lone Mountain. But that's a story for another day. Many years of peace would roll by, before violence would emerge again.

Meanwhile, the Beings agreed to one final task. While our people could partake of rains, we grew best with the waters of the Neera river. When our people in the Earth's realm were finished with Neera's waters, the Banyan Tree agreed to gift the waters of the Neera to the Sun. He in turn would gift it to the Moon, who gift them to our ancestors among the stars. Our ancestors would hold onto this water until our people on earth would need them again.

This is when they created the River in the Sky. Look up into the heavens, O people and see where the River flows! It flows in the direction of the Lone Mountain. That is no coincidence. For the River in the Sky is nothing but the Neera herself in another form. As she steams above our ancestor's fires, she moves towards where the Banyan Tree still stands.

It is the Banyan Tree which catches the Neera in her branches and brings her back to Earth, to nourish all of us once more. Thus, the cycle repeats again, another time. Neera flows from the Banyan Tree to be used by us. She is then taken up into the heavens by the Sun to be given to the Moon. The Moon gives her to our ancestors who boil her waters, waiting for the time we would need the Neera again. When the time is right, the River in the Sky is set in motion, to return to the Banyan Tree, to flow out of her first home.

And thus, we live, in concert with the world.

___
And with this, the Storyteller finished her tale.

Author's Note: The above tale is part of the Dodda Nadu Universe, a fictional world where my first novel (which I'm currently writing) is set. The River in the Sky and the Banyan Tree is a legend that's popular among a particular community of people in that Universe.



ಗಗನದ ನದಿ ಮತ್ತು ಆಲದ ಮರ (ಭಾಗ 4) | The River in the Sky and the Banyan Tree (Part 4) by Amogh Arakali is licensed under a Creative Commons Attribution-NonCommercial-NoDerivatives 4.0 International License.

Write a comment ...

Write a comment ...

Amogh Arakali

Fiction, Poetry, Art and Audio from Amogh Arakali